ಕರಂಗೋಲು ಕುಣಿತ 'ಕರ್ಕೋ ಮತ್ತು ಕೋಲು' ಎಂಬ ಎರಡು ಪದಗಳು ಸೇರಿ ಕಾರಂಕೋಲು, ಕಾರಂಗೊಲು ಎಂಬುದಾಗಿದೆ. ಕರ್ಂ ಎಂದರೆ ಕಪ್ಪು. ಆದ್ದರಿಂದ ಕಪ್ಪು ಕೋಲು ಕರ್ಂಕೋಲು ಅಥವಾ ಕರ್ಂಗೋಲು ಆಗಿರಬೇಕು. ಕಾರ್ಂಗೊಲು ನರ್ತಕರ ಕೈಯಲ್ಲಿ ಕಪ್ಪು ಕೋಲು ಇರುತ್ತದೆ. ಕೋಲು ಹಿಡಿದು ಮಾಡಿವ ನೃತ್ಯವೇ ಕರಂಗೊಲು ಕುಣಿತ. == ಕರ್ಂಗೋಲು ಕುಣಿತ == ಕರಂಗೋಲು ಒಂದು ಕುಣಿತದ ಹೆಸರು. ಏಪ್ರಿಲ್ ಮೊದಲ ವಾರ ಸುಗ್ಗಿಯ ಹುಣ್ಣಿಮೆಯ ಹಿಂದಿನ ದಿನದಂದು ಕರ್ಂಗೋಲು ಕುಣಿತ ನಡೆಸಲಾಗುತ್ತದೆ. ತುಳುನಾಡಿನ ಸುಳ್ಯ, ಪುಟ್ಟಾಪುರ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಈ ಕಾರ್ಂಗೊಲು ಕುಣಿತ ನಡೆಯುತ್ತದೆ. ಈ ನೃತ್ಯವನ್ನು ಆದಿದ್ರಾವಿಡರು ಮಾಡುತ್ತಾರೆ. ಅವರು ಪ್ರಾಚೀನ ಕಾಲದಿಂದಲೂ ಬೇಸಾಯ ಮಾಡುತ್ತಿದ್ದಾರೆ. ಆದ್ದರಿಂದ, ಕೃಷಿಯು ಈ ಜನರಿಗೆ ನಿಕಟ ಸಂಬಂಧ ಹೊಂದಿದೆ. == ಕಾರ್ಂಗೊಲು ಕುಣಿತದವರ ವೇಷಭೂಷಣ == ಕಾರ್ಂಗೊಲು ಕುಣಿತದಲ್ಲಿ ನಾಲ್ಕು ಜನರು ತಮ್ಮ ಸೊಂಟಕ್ಕೆ ಬಿಳಿ ಬಟ್ಟೆಯನ್ನು ಸುತ್ತುತ್ತಾರೆ ಮತ್ತು ಅವರು ತಮ್ಮ ತಲೆಯ ಮೇಲೆ ಬಿಳಿ ಬಟ್ಟೆ ಅಥವಾ ಬೈರಾಸ್ ಅನ್ನು ಕಟ್ಟುತ್ತಾರೆ. ಜೇಡಿಮಣ್ಣನ್ನು ಬೆರೆಸಿ ರುಬ್ಬಿ ಮುಖ, ಎದೆ, ಬೆನ್ನು, ಹೊಟ್ಟೆ ಇತ್ಯಾದಿಗಳಿಗೆ ಹಚ್ಚುತ್ತಾರೆ. ಮುಖಕ್ಕೆ, ಬೆನ್ನಿಗೆ, ಹೊಟ್ಟೆಗೆ ಚುಕ್ಕಿ ಹಾಕಿ ನೇರ ವಾದ ಗೆರೆ ಹಾಕುತ್ತಾರೆ. ಇದನ್ನು ಗೆಂಟಿಕಟ್ಟುನೆ ಎಂದು ಕರೆಯುತ್ತಾರೆ. ಅದೇ ರೀತಿಯ ಚುಕ್ಕೆಗಳನ್ನು ಕೈಗಳಿಗೆ ಅನ್ವಯಿಸಲಾಗುತ್ತದೆ. == ಕಾರ್ಂಗೊಲುವಿನ ವೇಷಭೂಷಣದಲ್ಲಿ ವ್ಯತ್ಯಾಸಗಳು == ಪುತ್ತೂರಿನ ಆಚೆಯಲ್ಲಿ ಗುಂಪಿನೊಂದಿಗೆ ಒರ್ವ ಹಿರಿಯ ವ್ಯಕ್ತಿ ಇರುತ್ತಾರೆ. ಅವರ ಸೊಂಟದಲ್ಲಿ ಮುಂಡು ಮತ್ತು ತಲೆಯಲ್ಲಿ ಮುಂಡಾಸು ಇರುತ್ತದೆ. ಹತ್ತಿಯ ಮೀಸೆಯನ್ನೂ ಅಂಟಿಸಲಾಗುತ್ತದೆ. ಅವರ ಮೈ ಗೆ ಬಣ್ಣ ಹಾಕಿರುವುದಿಲ್ಲ. ಒಂದಾ ಖಾಲಿ ಮೈಯಲ್ಲಿ ಅಥವಾ ಅಂಗಿ ಹಾಕಿ ಕೈಯಲ್ಲಿ ಬಿದಿರಿನ ಕೋಲನ್ನು ಹಿಡಿದುಕೊಂಡು ಇರುತ್ತಾರೆ. ಬೆಳ್ತಂಗಡಿಯ ಆಚೆ ಕುಣಿತದ ಗುಂಪಿನೊಟ್ಟಿಗೆ ಒರ್ವ ಕೊರಗ ಇರುತ್ತಾನೆ. ಅವನ ಮೈ ಗೆ ಕಪ್ಪು ಬಣ್ಣವನ್ನು ಬಲಿಯಲಾಗುತ್ತದೆ. ಮುಖಕ್ಕೆ ಜೇಡಿ ಮಣ್ಣಿನಿಂದ ಚುಕ್ಕಿ ಇಡುತ್ತಾರೆ, ತಲೆಗೆ ಅಡಿಕೆ ಮರದ ಎಲೆಯ ಹಾಳೆಯಿಂದ ಮಾಡಿದ ಮುಟ್ಟಾಲೆ ಇಟ್ಟು ಕೈಯಲ್ಲಿ ಕೋಲು ಹಿಡಿದುಕೊಂಡು ಇರುತ್ತಾರೆ. ಸೊಂಟಕ್ಕೆ ಕಪ್ಪು ಬಟ್ಟೆ ಅದರ ಮೇಲೆ ಗೆಜ್ಜೆ ಮತ್ತು ಕುತ್ತಿಗೆಯಲ್ಲಿ ಒಂದು ಹೂವಿನ ಮಾಲೆ ಇರುತ್ತದೆ. ಸುಳ್ಯ ದ ಆಚೆ ಕುಣಿತದ ಗುಂಪಿನ ಒಟ್ಟಿಗೆ ವಧು ವರರ ವೇಷ ಇರುತ್ತದೆ. ತಲೆಗೆ ಮುಂಡಾಸು, ಸೊಂಟಕ್ಕೆ ಮುಂಡು ಕಟ್ಟಿ ಉದ್ದ ಕೈಯ ಅಂಗಿ ಹಾಕಿದ ಮಧುಮಗನ ವೇಷ. ಸೀರೆ ರವಕೆ ಹಾಕಿ, ಕೂದಲು ನೇಯ್ದು, ಹೂ ಮುಡಿದು ಆಭರಣ ಹಾಕಿದ ಮಧುಮಗಳ ವೇಷ ಇರುತ್ತದೆ. == ಕುಣಿತದ ಕ್ರಮ == ಗ್ರಾಮ ಸಂಚಾರದ ಹೊತ್ತಿಗೆ ಕುಣಿತದ ಎಲ್ಲಾ ಸದಸ್ಯರು ಶುದ್ದದಲ್ಲಿ ಇರುತ್ತಾರೆ. ಗುಂಪಿನ ಮುಖ್ಯಸ್ಥ ಮನೆಯ ಅಂಗಳದಲ್ಲಿ ನಿಂತು 'ಪೊಲಿದೆತ್ತೊಂದು ಬತ್ತೋ' ಅಂತ ಹೇಳುತ್ತಾನೆ, ಅವಗ ಮನೆಯವರು ಅವರಿಗೆ ಬೆಳಕಿನ ವ್ಯವಸ್ತೆ ಮಾಡಿ ಕುಣಿಯಲು ಅನುಮತಿ ಕೊಡುತ್ತಾರೆ. ಗಂಟೆಮಣಿಯನ್ನು ಜೊರಾಗಿ ಹೊಡೆದು ಪದ್ಯದ ಜೊತೆಗೆ ಕುಣಿತ ಪ್ರಾರಂಭಿಸುತ್ತಾರೆ. ಕುಣಿತದವರು ಎರಡು ಸಾಲಿನಲ್ಲಿ ನಿಂತು ಒಂದು ಹೆಜ್ಜೆ ಮುಂದೆ ಮತ್ತು ಒಂದು ಹೆಜ್ಜೆ ಹಿಂದೆ ಇಟ್ಟು, ಎರಡೂ ಕೈಯಲ್ಲಿ ನೆಕ್ಕಿಯ ಗೊಂಚಿಲನ್ನು ಹಿಡಿದು, ಹಿಂದೆ ಮುಂದೆ ಬೀಸಿಕೊಂಡು ನಡೆಯುತ್ತಾರೆ. ಮುಂದೆ ಹೋಗಿ ದಿಕ್ಕು ಬದಲಿಸಿದಾಗ ಕೂಡಾ ಅದುವೇ ಕ್ರಮದಲ್ಲಿ ಇರುತ್ತದೆ. ಒರ್ವ ಪದ್ಯ ಹಾಡಿಕೊಂಡು ಡೋಲುಬಡಿದುಕೊಂಡು ಇರುತ್ತಾನೆ. ಅಥಾವ ಕೆಲವೊಮ್ಮೆ ಡೋಲು ಬಡಿಯಲು ಬೇರೆ ಜನರೂ ಇರುತ್ತಾರೆ. ಹಿರಿಯ ವ್ಯಕ್ತಿಯ ವೇಸದವರು ಕೋಲನ್ನು ನೆಲಕ್ಕೆ ಬಡಿದುಕೊಂಡು ಕುಣಿಯುವವರ ಆಚೆ ಈಚೆ ಹೋಗುತ್ತಾ ಇರುತ್ತಾರೆ. ಕೊರಗ ಮತ್ತು ವಧು ವರರ ವೇಸದವರು ಕೂಡಾ ಹೀಗೆಯೇ ಸುತ್ತು ಬಂದು ನಲಿಯುತ್ತಾರೆ. ಪದ್ಯ ಹೇಳುವವರು ಒಂದು ಸಾಲು ಹೇಳಿದ ನಂತರ ಉಳಿದವರು, ' ಪೊಲಿಯೋ ಪೊಲ್ಯರೆಪೋ ಪುವ್ವೆ ಪೋಂಡುಲ್ಲಯಾ ' ಅಂತ ಹೇಳುತ್ತಾರೆ. ಹೀಗೆ ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಇವರಿಗೆ ಅಕ್ಕಿ, ಭತ್ತ, ಮತ್ತು ಸ್ಡಲ್ಪ ಹಣವೂ ಸಿಗುತ್ತದೆ. ಮನೆ ಮನೆಗೆ ಹೋಗಿ ಕುಣಿಯುವ ಕುಣಿತ ಆದ ಕಾರಣ, ಮನೆಯವರೇ ಪ್ರೇಕ್ಷಕರಾಗುತ್ತಾರೆ . ಹೆಚ್ಚಾಗಿ ಈ ಕುಣಿತ ಗ್ರಾಮ ಮಟ್ಟದಲ್ಲಿ ಮಾತ್ರ ನಡೆಯುತ್ತದೆ. ==ಕರ್ಂಗೋಲುನ ತುಳು ಪಾರ್ದನ ಅಥಾವ ಪದ್ಯ== ಡಾ.ವಾಮನ ನಂದಾವರದಾರ್ ಪಾಲ್ತಾಡಿ ರಾಮಕೃಷ್ಣ ಆಚಾರ್ ಆರ್ ಸಂಪಾದನೆ ಮಾಡಿದ ಕರ್ಂಗೋಲುನ ಕುಣಿತದ ಪಾರ್ದನ ಅಥಾವ ಪದ್ಯ ಈ ರೀತಿಯಾಗಿದೆ. == ಕನ್ನಡದಲ್ಲಿ ಕರ್ಂಗೋಲು ಕುಣಿತದ ಪಾರ್ದನ ಅಥಾವ ಪದ್ಯ == ತುಳು ಭಾಷೆಯ ಸೊಗಡಿನಿಂದ ತುಂಬಿರುವ ಕರಂಗೋಲು ಪಾರ್ದನವನ್ನು ಕನ್ನಡದ ಓದುಗರಿಗೂ ಅರ್ಥವಾಗಲಿ ಮತ್ತು ತೌಲನಿಕ ಅಧ್ಯಯನದ ಹಿನ್ನೆಲೆಯಲ್ಲಿ ಕರಂಗೋಲು ಹಾಡಿನ ಕನ್ನಡ ರೂಪವನ್ನು ಡಾ.ಕೆ. ಚಿನ್ನಪ್ಪ ಗೌಡರು ಸಂಪಾದಿಸಿದ್ದಾರೆ. ಅದು ಈ ಕೆಳಗಿನಂತಿದೆ. == ವೇಷ ತೆಗೆಯುವ ಕ್ರಮ == ಒಂದು ರಾತ್ರಿಯ ಸಂಚಾರ ಮುಗಿಸಿ ಕರಂಗೋಲು ಕುಣಿತದ ಗುಂಪು ಒಂದು ಕಾಸರ್ಕ ಮರದ ಬುಡದ ಬಳಿ ಬರುತ್ತಾರೆ. ಬಣ್ಣ ತೆಗೆದು, ವೇಷವನ್ನು ಕಳಚುವ ವಿಧಿಯೂ ಇದೇ ಮರದ ಬುಡದಲ್ಲಿ ಆಗುತ್ತದೆ. ಬಣ್ಣ ತೆಗೆದು ಮತ್ತು ವೇಷವನ್ನು ಕಳಚಿ, ಕಾಸರ್ಕ ಮರದ ಏಳು ಎಲೆಗಳನ್ನು ತೆಗೆದು ನೆಲದ ಮೇಲೆ ಸಾಲಾಗಿ ಇಟ್ಟು ಒಂದು ಮುಷ್ಟಿ ಅಕ್ಕಿಯನ್ನು ಹಾಕಿ ಕೈ ಮುಗಿದು ನೆಕ್ಕಿಯ ಸೊಪ್ಪುಗಳನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದೆಲ್ಲಾ ಮುಗಿದ ನಂತರ ಸ್ನಾನ ಮಾಡಿ ಉಪಹಾರ ಸೇವಿಸುತ್ತಾರೆ. ಹೀಗೆಯೇ ಒಂದು ವಾರ ಈ ಕುಣಿತ ನಡೆಯುತ್ತದೆ. == ಪ್ರಸಾದದ ಊಟ ಹಂಚುವಿಕೆ == ಕರಂಗೋಲು ಕುಣಿತದ ಕೊನೆಯ ದಿನದಂದು ಕಾನಡ ಮತ್ತು ಕಾಟದ ಕುಲದೈವಗಳಿಗೆ ಅಗೇಲು ಬಡಿಸಿ ಪ್ರಾರ್ಥನೆ ಸಲ್ಲಿಸುವ ಪದ್ಧತಿಯೂ ಇದೆ. ಸಂಗ್ರಹಿಸಿದ ಅಕ್ಕಿ, ಭತ್ತ, ಹಣವನ್ನು, ರೊಟ್ಟಿ ಮತ್ತು ಕೋಳಿ ಆಡುಗೆ ಮಾಡಲು ಬಳಸಲಾಗುತ್ತದೆ ಮತ್ತು ಕರಂಗೋಲು ನೃತ್ಯದ ಪ್ರದರ್ಶನದ ನಂತರ ಅಂಗಳದಲ್ಲಿ ಚಾಪೆ ಹಾಸಿ ಎಲ್ಲರೂ ಹಂಚಿ ಬಡಿಸಿಕೊಂಡು ತಿನ್ನುತ್ತಾರೆ. == ಉಲ್ಲೇಖಗಳು ==